ಬೆಟ್ವಾ ( ಸಂಸ್ಕೃತ : वेत्रावती) ಮಧ್ಯ ಮತ್ತು ಉತ್ತರ ಭಾರತದಲ್ಲಿನ ಒಂದು ನದಿ ಮತ್ತು ಯಮುನೆಯ ಉಪನದಿಯಾಗಿದೆ. ಇದು ಮಧ್ಯಪ್ರದೇಶದ ಹೋಶಂಗಾಬಾದ್ (ನರ್ಮದಾಪುರಂ) ನ ಉತ್ತರಕ್ಕೆ ವಿಂಧ್ಯ ಪರ್ವತಗಳಲ್ಲಿಹುಟ್ಟುತ್ತದೆ. ಮಧ್ಯಪ್ರದೇಶ ಮತ್ತು ಓರ್ಚಾ ಮೂಲಕ ಉತ್ತರ ಪ್ರದೇಶದಿಂದ ಈಶಾನ್ಯಕ್ಕೆ ಹರಿಯುತ್ತದೆ. ಇದು ಹರಿಯುವ ಅರ್ಧದಷ್ಟು ಭಾಗ ಮಾಲ್ವಾ ಪ್ರಸ್ಥಭೂಮಿಯಲ್ಲಿ ಸಾಗುತ್ತದೆ, ಈ ಪ್ರದೇಶ ಸಂಚಾರಕ್ಕೆ ಯೊಗ್ಯವಲ್ಲ. ಬೆಟ್ವಾ ಮತ್ತು ಯಮುನಾ ನದಿಗಳ ಸಂಗಮವು ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿದೆ. ಭಾರತೀಯ ನೌಕಾಪಡೆಯು ನದಿಯ ಗೌರವಾರ್ಥವಾಗಿ ತನ್ನ ಒಂದು ಯುದ್ದನೌಕೆಗೆ ಐಎನ್‌ಎಸ್ < ="">ಬೆಟ್ವಾ</> ಎಂದು ಹೆಸರಿಟ್ಟಿದೆ. == ಇತಿಹಾಸ == ಸಂಸ್ಕೃತದ "ಬೇಟ್ವಾ" ವೆತ್ರಾವತಿ ಯಾಗುತ್ತದೆ . ಈ ನದಿಯನ್ನು ಮಹಾಭಾರತ ಮಹಾಕಾವ್ಯದಲ್ಲಿ ಚರ್ಮವತಿ ನದಿಯೊಂದಿಗೆ ಉಲ್ಲೇಖಿಸಲಾಗಿದೆ. ಇವೆರಡೂ ಯಮುನೆಯ ಉಪನದಿಗಳು. ವೇತ್ರಾವತಿಯನ್ನು ಶುಕ್ತಿಮತಿ ಎಂದೂ ಕರೆಯುತ್ತಿದ್ದರು. ಚೇದಿ ಸಾಮ್ರಾಜ್ಯದ ರಾಜಧಾನಿ ಈ ನದಿಯ ದಡದಲ್ಲಿತ್ತು. ನದಿಯ ಉದ್ದವು ಅದರ ಉಗಮಸ್ಥಾನದಿಂದ ಯಮುನಾದ ಜೊತೆ ಸಂಗಮವಾಗುವವರೆಗೆ 590 (370 ), ಅದರಲ್ಲಿ 232 (144 ) ಮಧ್ಯಪ್ರದೇಶದಲ್ಲಿದೆ ಮತ್ತು 358 (222 ) ಉತ್ತರ ಪ್ರದೇಶದಲ್ಲಿದೆ. 1973 ರಲ್ಲಿ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳ ನಡುವಿನ ಅಂತರ-ರಾಜ್ಯ ಒಪ್ಪಂದದ ಮೂಲಕ, ಬೆಟ್ವಾ ರಿವರ್ ಬೋರ್ಡ್ (ಬಿ.ಅರ್.ಬಿ) ಅನ್ನು ಬೆಟ್ವಾ ರಿವರ್ ಬೋರ್ಡ್ ಆಕ್ಟ್, 1976 ರ ಅಡಿಯಲ್ಲಿ ರಚಿಸಲಾಯಿತು. ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಸಚಿವರು, ಮಂಡಳಿಯ ಅಧ್ಯಕ್ಷರು, ಕೇಂದ್ರ ವಿದ್ಯುತ್ ಸಚಿವರು, ಕೇಂದ್ರ ಜಲಸಂಪನ್ಮೂಲ ರಾಜ್ಯ ಸಚಿವರು ಮತ್ತು ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಹಣಕಾಸು, ನೀರಾವರಿ ಮತ್ತು ವಿದ್ಯುತ್ ಉಸ್ತುವಾರಿ ಮುಖ್ಯಮಂತ್ರಿಗಳು ಮತ್ತು ಸಚಿವರು ಇದರ ಸದಸ್ಯರಾಗಿದ್ದಾರೆ. == ಭವಿಷ್ಯ == ಮಧ್ಯಪ್ರದೇಶದಲ್ಲಿ ನದಿ ಜೋಡಣೆ ಯೋಜನೆಯ ಭಾಗವಾಗಿ ಬೆಟ್ವಾ ನದಿಯನ್ನು ಕೆನ್ ನದಿಯೊಂದಿಗೆ ಜೋಡಿಸಲಾಗುತ್ತಿದೆ. ನಂತರ ರಾಷ್ಟ್ರೀಯ ವನ್ಯಜೀವಿ ಮಂಡಳಿ (ಎನ್.ಬಿ.ಡಬ್ಲು.ಎಲ್) ನದಿಗಳ ಕೆನ್-ಬೆಟ್ವಾ ಇಂಟರ್-ಲಿಂಕಿಂಗ್ (ಐ.ಎಲ್.ಅರ್) ಯೋಜನೆಗೆ ತನ್ನ ಅನುಮತಿಯನ್ನು ನೀಡಿದೆ. ಬೆಟ್ವಾ ನದಿಯ ಮೇಲಿನ ಮತ್ತೊಂದು ಗಮನಾರ್ಹ ಯೋಜನೆ ಎಂದರೆ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳ ನಡುವಿನ ಕಾಮಗಾರಿಯಾದ ಮಟಟಿಲಾ ಅಣೆಕಟ್ಟು ನಿರ್ಮಾಣವಾಗಿದೆ. ಈ ಪ್ರದೇಶವು ವಲಸೆ ಬರುವ ಜಲಪಕ್ಷಿಗಳಿಗೆ ತಾಣವಾಗಿದೆ. ಕೆನ್ ಮತ್ತು ಬೆಟ್ವಾ ನದಿಗಳನ್ನು ಜೋಡಿಸುವ ಮಹತ್ವಾಕಾಂಕ್ಷೆಯ ಯೋಜನೆಯು ಮಾನವ-ಪ್ರಾಣಿ ಸಂಘರ್ಷಕ್ಕೆ ಕಾರಣವಾಗಿದೆ. ಕೇಂದ್ರ ಜಲ ಸಚಿವಾಲಯದ ನೇತೃತ್ವದ ಯೋಜನೆಯ ಪ್ರತಿಪಾದಕರು, ಪ್ರಸ್ತಾವಿತ ದೌಧನ್ ಅಣೆಕಟ್ಟು ಮತ್ತು 230 (140 ) ಕಾಲುವೆ-ಯೋಜನೆಯ ಪ್ರಮುಖ ರಚನೆಗಳು ಉತ್ತರ ಪ್ರದೇಶದ ಕೆನ್‌ನ ಹೆಚ್ಚುವರಿ ನೀರನ್ನು ಮಧ್ಯಪ್ರದೇಶದ ಬೆಟ್ವಾಗೆ ವರ್ಗಾಯಿಸುತ್ತದೆ, ಇದು ಸುಮಾರು 700,000 (1,700,000 ) ನೀರಾವರಿಗೆ ನಿರ್ಣಾಯಕವಾಗಿದೆಬರಪೀಡಿತ ಬುಂದೇಲ್‌ಖಂಡದಲ್ಲಿ == ಅಣೆಕಟ್ಟುಗಳು == ರಾಜ್‌ಘಾಟ್ ಅಣೆಕಟ್ಟು ಮಟಟಿಲ ಅಣೆಕಟ್ಟು ಪರಿಚ್ಚಾ ಅಣೆಕಟ್ಟು ಧುರವಾರ ಅಣೆಕಟ್ಟು ಹಲಾಲಿ ಅಣೆಕಟ್ಟು == ಸಹ ನೋಡಿ == ಗಂಗಾ ಯಮುನಾ == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಬೆಟ್ವಾ ನದಿ ಕೆನ್-ಬೆಟ್ವಾ ನದಿ ಸಂಪರ್ಕ ಯೋಜನೆಗೆ ರೂ 4,500 ಕೋಟಿ ವೆಚ್ಚದ ಬಿಸಿನೆಸ್ ಲೈನ್ ಟೆಂಪ್ಲೇಟು: Pradeshಟೆಂಪ್ಲೇಟು: